
ಸಿಡುಕು ಮುಖಗಳು...... ನಕ್ಕು ಎಷ್ಟೋ ವರ್ಷಗಳು ಸಂದಿರುವಂತೆ ಕಾಣುವ ಸಿಂಡರಿಸಿದ ಮೋರೆಗಳು...
tension-tension (tension ಕಮ್ಮಿ ಮಾಡಲು ವಿಧವಿಧ ತೇಲಗಳು ಬೇರೆ!!!!) .....
ಇಡೀ ಭೂಮಿಯ ಭಾರ ಹೊತ್ತು ತಮ್ಮಿಂದಲೇ ಜಗದೋದ್ಧಾರ ಅನ್ನೋ ಪೋಸು, "busy-busy.... ಟೈಮ್ ಇಲ್ಲಪ್ಪ ನಗೋಕೆ ಸಿಕ್ಕಾಪಟ್ಟೆ ಕೆಲಸ... ಹೀಗೆ ಟೈಮ್ ಹಾಳ್ ಮಾಡ್ತಾ ಕೂರಕ್ ಆಗಲ್ಲ!" ಅನ್ಕೊಂಡ್ ತಿರುಗೋ ಮ
ಹಾಶಯರು (ಅದೇನ್ ಕೆಲಸ ಮಾಡಿ ದೇಶೋದ್ಧಾರ ಮಾಡ್ತಾರೋ ಅವರಿಗೇ ಗೊತ್ತು!!)......
ತಮ್ಮವರೊಂದಿಗೆ-ಆಪ್ತರೊಂದಿಗೆ ಒಂದೆರಡು ಘಳಿಗೆಗಳು ನಕ್ಕು ಮಾತನಾಡುವ ಸಂಯಮ ಸಮಯವಿಲ್ಲದವರು.....
ನಕ್ಕರೆ ಅಪರಾಧ ಎಂದು 'discipline' ಪಾಲಿಸುವವರು.........
ಈ ಮೇಲ್ಕಂಡ 'ಪ್ರಜೆ'ಗಳಿಗೆ ನನ್ನ ಘೋರ ಧಿಕ್ಕಾರ! ಹಾಗು ಅನುಕಂಪವನ್ನು ಅರ್ಪಿಸುತ್ತಿದ್ದೇನೆ.. ....!
"ಹೇಯ್ ಕೋತಿ.." "ಕತ್ತೆ, ಕೋತಿ ಬುದ್ದಿ ಬಿಡು, 3 ಕತ್ತೆ ವಯಸ್ಸಾಗಿದೆ.." "ನಿನಗೆ ಹೇಳೋದು ಒಂದೇ ಆ ಕಪಿಗಳ್ಗೆ ಹೇಳೋದು ಒಂದೇ.." "ಅಪ್ಪ್ಪಾಪ್ಪಾ ಎನ್ ಆಟ ಅದು ನಿಂದು, ಎನ್ ಮಾತಾಡ್ತಾಳೆ, ಕಿಚಿ ಪಿಚಿ ಕಿಚಿ ಪಿಚಿ nonstop nonsense"
"ಮೆಂಟಲ್ ಆ? ಎಷ್ಟ್ ನಗ್ತ್ಯಾ? -- ಹೀಗೆಲ್ಲ ಅಂದೋರ ಮಾತು ಇದುವರೆಗೂ ಕೇಳಿಲ್ಲ ಅಂತ ಘೋಷಿಸುತ್ತಿದ್ದೇನೆ!!! 
;-) ಈ ನನ್ನವರಿಗೆಲ್ಲಾ ನನ್ನ ಉತ್ತರ - "ನೋಡಿ ಸ್ವಾಮೀ ನಾನಿರೋದೆ ಹೀಗೆ"! salpa adjust maadi!!
ನಗು ನನ್ನ ಭಾಷೆ, ಕೋತಿಯಾಟ ನನ್ನ ಧರ್ಮ! ಭಾಷೆ & ಧರ್ಮನಾ ಯಾರಾದರೂ ತ್ಯಜಿಸುವರಾ...?!
:-)
ಕೆಲವು ಕೋತಿತನಗಳನ್ನು ಬಿಟ್ಟು ಕೊಡಲು ಸಾಧ್ಯವೇ ಇಲ್ಲ!! ನನ್ನ ಆಪ್ತರು, ನನ್ನ ಜನರೊಂದಿಗೆ ಇದ್ದಾಗಲಂತೂ ಜಿತವಾಗಿರುವುದು ಅಸಾಧ್ಯಕರ ವಿಷಯ!!
----> ಸುಮ್ಮನೆ ಕೂತಿರುವರ ತಲೆ ಮೇಲೆ ಪಟ್ ಅಂತ ಒಂದು ಏಟು ಕೊಟ್ಟು ಅವರ ಕೂದಲು ಎಳೆಯುವುದು.. ವಾಪಸ್ ವೊದೆ ಬೀಳೋ signs ಕಂಡು ಬಂದ್ರೆ, ಅಲ್ಲಿಂದ ಪರಾರಿ!!
----> ಮೆಟ್ಟಲುಗಳಿಂದ ಬಿದ್ದರೆ, ಮೆಟ್ಟಲುಗಳಿಗೆ ಬಯ್ದು, ವೊದ್ದು, ನನ್ನ ಗೆಳೆಯರು ಜೊತೆಯಲ್ಲಿದ್ದರೆ ಅವರಿಂದಲೂ ಬಯ್ಯಿಸುವುದು...!
----> ಯಾವುದು ಇದೆಯೋ ಅದು ಬೇಡ, ಯಾವುದು ಇಲ್ಲವೊ ಅದು ಬೇಕೇ ಬೇಕು! Horlicks ಇರೋವಾಗ bournvita ಬೇಕು, bournvita ಇರೋವಾಗ horlicks ಚಿಂತೆ... ಹೇಗೋ ಕುಡಿಯೋದರಿಂದ ತಪ್ಪಿಸಿಕೊಳ್ಳುವ ನೆಪ!!
----> ಚಿತ್ರ ವಿಚಿತ್ರ ಮುಖಗಳನ್ನು ಮಾಡುವುದು..
----> ಒಂದು ಜಾಗದಲ್ಲಿ ಸೀಮಿತವಾಗದೆ ಇರುವುದು.. ತಾರಾಟ.. ಒಂದು ಕಡೆ ಇಂದ ಇನ್ನೊಂದೆಡೆಗೆ..
----> ಇರುವೆಗೆ, ಜಿರ್ಲೆಗೆ, spidermanಗಳಿಗೆ ಹಿತ ಉಪದೇಶ... ಅವು ಕೇಳಲಿಲ್ಲ ಅಂತ ಗೊತ್ತಾದರೆ ಗೋಡೆ ಮೇಲಿದ್ದ ಅವನ್ನು ooooooffff ಮಾಡಿ ಬೀಳಿಸುವುದು, ನಂತರ ಎಲ್ಲಿಲ್ಲದ ಕರುಣೆ ಪ್ರೀತಿ ಬಂದು ಮತ್ತೆ ವಾಪಸ್ ನೋವಾಗದಂತೆ ಗೋಡೆಗೆ ತಂದು ಬಿಡುವುದು!! ಮರ ಗಿಡ ಮೋಡ ಗೋಡೆ ಚಂದಮಾಮ ಸೂರ್ಯ ಹೀಗೆ ಎಲ್ಲದರ ಜೊತೆ ಮಾತು ಜಗಳಗಳು...
----> ಮಳೆ ಬಂದರೆ ಯಾರು ತಡಿಯೋರೆ ಇಲ್ಲದಂತೆ ಹೋಗಿ ಕುಣಿದು ಬರುವುದು (ಒಮ್ಮೊಮ್ಮೆ daddy mommyಗೆ ಗೊತ್ತಾಗದ ಹಾಗೆ ಬೆಕ್ಕಿನ ತರಹ ಓಡಿ ಹೋಗಿ ಬರುವುದು), ಮಣ್ಣಿನ ಆಟ, ಮರಗಳನ್ನು ಅಲ್ಲಾಡಿಸಿ ಎಲೆಗಳ ಮೇಲಿರುವ ನೀರಿನ ಹನಿಗಳನ್ನು ಮುಖದ ಮೇಲೆ ಬೀಳುವಂತೆ ಮಾಡಿ ಕುಣಿಯುವುದು...
ಹೀಗೆ ಪ್ರತಿ ವಿಷಯದಲ್ಲೂ ಲೆಕ್ಕವಿಲ್ಲದಷ್ಟು ಕೋತಿಯಾಟ ಇದ್ದೇ ಇರುತ್ತದೆ... constant ನಗು!! ಆಟಪಾಟಗಳಲ್ಲೂ ನಗು!! ಎಲ್ಲೆಲ್ಲೂ ನಗುವೇ ನಗು.....
ಎಲ್ಲೆಲ್ಲೂ ತರಲೆ... ಅದರಲ್ಲಿರೋ ಖುಷಿ ಸೀರಿಯಸ್ ಆಗಿ ಸಿಡುಕುವುದರಲ್ಲಿ ಇಲ್ಲ .... ಬಯ್ಯಿಸಿಕೊಳ್ಳುವುದರಲ್ಲಿ ಸಿಗುವ ಖುಷಿ ಹೊಗಳಿಕೆ ಮಾತುಗಳಲ್ಲಿ ಸಿಗೋಲ್ಲಾ... :-)
ತಲೆಗೂದಲು ಕೆದರಿಕೊಂಡು ಚಿತ್ರವಿಚಿತ್ರ ಪೋಸ್ ಕೊಡೋ ಆನಂದ tidy ಆಗಿ ಬಾಚಿಕೊಂಡು neatly done hair ಅಲ್ಲಿ ಇಲ್ಲ!! :-D
aaaaaaaaನಕ್ಕು ಬಿಡಿ.... ಮನಸ್ಸು ಪೂರ್ತಿ ಮಗುವಂತೆ ನಕ್ಕು ಬಿಡಿ... :-) :-) aaaa hahahahaaa uuuuuhahahaaa.....
ah! very good very good... super ಪ್ರಯತ್ನ ಕನ್ನಡದಲ್ಲಿ ಬರೆಯೋಕ್ಕೆ... :):)
ಚಪ್ಪಾಳೆ............ =D> =D>
ಹೀಗೇ ಮುಂದುವರೆಸು.. ದೇವರು ಒಳ್ಳೇದು ಮಾಡ್ಲಿ :)
ಓಕೆ.. ಈಗ ನಿನ್ನ ಬ್ಲಾಗ್‌ಗೆ ಕಮೆಂಟ್ಸ್ :)
"tension-tension (tension ಕಮ್ಮಿ ಮಾಡಲು ವಿಧವಿಧ ತೇಲಗಳು ಬೇರೆ!!!!)"
ಅಷ್ಟೇ ಅಲ್ಲ.. ಕ್ರೇನ್ ಅಡಿಕೆಪುಡಿ ಕೂಡ ಇದೆ... ;)
"ಈ ಮೇಲ್ಕಂಡ 'ಪ್ರಜೆ'ಗಳಿಗೆ ನನ್ನ ಘೋರ ಧಿಕ್ಕಾರವನ್ನು ಹಾಗು ಅನುಕಂಪವನ್ನು ಅರ್ಪಿಸುತ್ತೇನೆ....!"
ನನ್ನ ಧಿಕ್ಕಾರ ಕೂಡ ಇರಲಿ...
"ನಗು ನನ್ನ ಭಾಷೆ, ಕೋತಿಯಾಟ ನನ್ನ ಧರ್ಮ!"
ha ha ha ha ha ha ha
"laughter classes" ಗೂ ಹೋಗಿ ಮುಗಿ ಬೀಳುವರು... ?
ಪಾಪ... i pity them...
"ಅಷ್ಟೊಂದ್ ಕಷ್ಟಾನಾ ನಗೋದು????!!!!!!!"
ಏನ್ ಮಾಡೋದು.. ಅವೆಲ್ಲ manufacturing defects-ಉ.. ಏನೂ ಮಾಡಕ್ಕಾಗಲ್ಲ... ನಾನು ನೋಡಿರೋಹಾಗೆ ಕೆಲವರಿಗೆ ಅದು 'ಕಷ್ಟ' ಅಲ್ಲ.. 'impossible' ಅನ್ನೋ ಥರಾನೂ ಕಾಣ್ಸತ್ತೆ!!! he he..
finally, ನನ್ ಸ್ಟೈಲಲ್ಲೇ ಒಂದು ನಗು ನಕ್ಬಿಟ್ರೆ...
Uuuuuuuuuuuuuuuuuhhhhaahahahahahahahahahahahahaha :) :) :)
ಗಂಡಭೇರುಂಡ said...
November 20, 2007 8:24 PM
ಮನದಂತರಾಳದಲೆನಗೆ ಸಂತಸವು ನೆಲೆಸಿಹುದು
ಹೃದಯಾಂತರಾಳದಿಂ ನಿನಗೆ ಶುಭಾಶಯವೆನದು
ಕನ್ನಡದ ಕೀರುತಿಯು ಹೀಗೇ ಹರಡಲೆಂದೆಂದೂ
ನಿನ್ನ ಬ್ಲಾಗಿನಲ್ಕನ್ನಡ ನಾಟ್ಯವಾಡಲೆಂದೆಂದೂ
ಕನ್ನಡಾಂಬೆಯು ನಿನ್ನ ನೋಡಿ ನಗುತಿಹಳು
ಕನ್ನಡದಿ ಬರೆದಿಹ ನಿನ್ನ ಎತ್ತಿ ಮುದ್ದಾಡುವಳು
ಮಗುಗೆ ತಾಯಿಯು ಹೇಗೋ ನಿನಗೆ ಹಾಗೇ ಅವಳು
ಮಡಿಲಲ್ಮಲಗಿಸಿಕೊಂಡು ಲಾಲಿ ಹಾಡುವಳವಳು
ನೀನು ಹೇಳಿರುವುದು ನಿಜ. ಸದಾ ನಗುತಿರಬೇಕು. ಅಣ್ಣಾವ್ರು ಹೇಳಿದಂತೆ ನಗುನಗುತಾ ನಲಿ ನಲಿ. ಯಾವಾಗ್ಲೂ ಹೀಗೇ ಇದ್ರೆ ಎಷ್ಟು ಚೆನ್ನಾಗಿರತ್ತಲ್ವಾ?
ಆದ್ರೆ ನಗು ಒಂದು ಕಲೆ. ಸದಾಕಾಲ ಎಲ್ಲರಿಗೂ ಒಲಿಯಲ್ಲ ಅದು. ನಿನಗೆ ಒಲಿದಿದೆ. ಶ್ರೀನಿವಾಸ ಹೇಳಿದ ಹಾಗೆ ನಮ್ಮಲ್ಲಿ ಮ್ಯಾನುಫ್ಯಾಕ್ಚರಿಂಗ್ ಡಿಫೆಟ್ಕ್ಟೇನೋ! ಇಲ್ಲದ ನಗು ತಂದುಕೊಳ್ಳುವುದರಲ್ಲಿ ಪ್ರಯೋಜನವಿಲ್ಲ ಅನ್ನೋದಂತೂ ಸತ್ಯ...
ಕನ್ನಡದಲ್ಲಿ ಬ್ಲಾಗಿಸಿದ್ದಕ್ಕೆ ನನ್ನ ಶುಭಾಶಯಗಳು. ಹೀಗೇ ನೂರ್ಕಾಲ ನಗುತಿರು.
Srikanth - ಶ್ರೀಕಾಂತ said...
November 20, 2007 10:42 PM
ಕ್ಯಾಶ್ ಕೌಂಟರಿನ ಹುಡುಗಿ ಕೊಂಚವೂ ನಗದು..
ಅದಕ್ಕೇ ಅವಳ ಮುಂದೆ ಬೋರ್ಡು 'ನಗದು'!!
- ಡುಂಡಿರಾಜ್
Parisarapremi said...
November 20, 2007 11:44 PM
@ಗಂಡಭೇರುಂಡ ::
Thaaaaankuuu thaaankuu thaaanku Gurrrr ^:)^ ^:)^
ನಿಮ್ಮ ಹಾರೈಕೆಗೆ (ಕೋಟಿ ^ಕೋಟಿ)^ಕೋಟಿ ವಂದನೆಗಳು!! ತುಂಬಾ ಖುಷಿ ಆಯ್ತು..... A thousand unsaid thoughts manifesting themselves as a smile... :-) ಇದು ನಿಮಗೆ...
ನಿಮ್ ಸ್ಟೈಲ್ Uuuuuuuuuuuuuuuuuhhhhaahahahahahahahahahahahahaha ಸೂಪರ್....!! sooooooooooooooperrrr!!!!!
uuuhahahahaahahahaaa!! :-)
@ಶ್ರೀಕಾಂತ್ ::
ಶ್ರೀಕಾಂತ್.... ಸಾಧ್ಯ ಆಗಿದ್ರೆ ನಿನ್ನ ಈ ಕಾಮೆಂಟ್ ನ ಇಲ್ಲಿಂದ ಕಿತ್ತು ನನ್ನ ಪುಟ್ಟ ಅಂಗೈಯಿನ ಗೂಡಲ್ಲಿ ಸದಾ ನನ್ನ ಹತ್ತಿರಾನೆ ಇರೋ ಹಾಗೆ ಇಟ್ಕೊತಾ ಇದ್ದೆ!!! ನಿನ್ನ ಕವಿತೆ ಓದಿ ತುಂಬಾ ಖುಷಿ ಆಯ್ತು!! ನನಗೆ ನಿಮ್ಮೆಲ್ಲರ ತರ ಕವಿತೆ ಬರೊಲ್ಲ.... ಇಲ್ಲಾಂದ್ರೆ ಕವಿತೆಲೇ ವಂದನೆ ಹೇಳ್ತಾ ಇದ್ದೆ...
ಪದ ಬರದ ನನ್ನ ಮನದಾಳದ ವಂದನೆಗಳನ್ನು ಪರಿಗಣಿಸ್ತ್ಯಾ ಅಲ್ವಾ ?!:-) :-)
ನಿನ್ನ ಪ್ರೋತ್ಸಾಹಕ್ಕೆ, ಹಾರೈಕೆಗೆ ಸದಾ ಋಣಿ ನಾನು!!
Thaaaaaaanku ಶ್ರೀಕಾಂತ್..
@ಪರಿಸರಪ್ರೇಮಿ ::
uuuuhahahahaa...
ಆ ಕ್ಯಾಶ್ ಕೌಂಟರಿನ ಹುಡುಗಿಗೆ ನಾಲಕ್ಕು ಬಾರಿಸಿ ಹೇಳಿ.. "ಯಾಕಮ್ಮ ಎನ್ ರೋಗ ನಿನಗೆ ನಗಕ್ಕೆ... ನಕ್ಕರೆ ನಿನ್ ನಗನ ನಾವು ತಿಂದು ಬಿಡಲ್ಲ!! ನಗೋದು ಕಲಿ.." ಅಂತ!!
Dynamic Divya said...
November 21, 2007 3:20 AM
ನಿನ್ನ ಕನ್ನಡ ಲೇಖನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ....ಚಪ್ಪಾಳೆ ಚಪ್ಪಾಳೆ.. ಚಪ್ಪಾಳೆ
ಮಗು ಬೆಳೀತಾ ಬೆಳೀತಾ ಮುಗ್ದತೆ , ಸಹಜತೆ ನಗು ಎಲ್ಲಾನೂ ಕಳ್ಕೊತಾ ಹೋಗತ್ತೆ ... ಯಾರಿಗೆ ತಾನೆ ನಗದೇ ಇರಕ್ಕೆ ಸಾಧ್ಯ?? ಸಮಾಜ ಹಾಗೆ ಮಾಡತ್ತೆ , ಮಾಡ್ಸತ್ತೆ, ನಗು ನ ಕಿತ್ಕೊಳತ್ತೆ ... ಆ ನಗು ಮರ್ತಿರೋರ್ಗೆ ನೀನು ನಿನ್ನ ಮೂಲಕ ನಗುವನ್ನ ಮರುಕಳಿಸು.... ಹೀಗೆ ನಗ್ತಾ ನಗ್ತಾ ಎಲ್ರನ್ನು ನಗ್ಸ್ತಾ ಇರು.... ನಿನಗೆ ಶುಭವಾಗಲಿ ..... :-)
Sridhar said...
November 22, 2007 1:49 AM
Hey U simply unstoppable!![;)]
U rock Divya..keep up d good writing.. pleasure to read ur Articles.. really superb..[:)]
pradeep said...
January 1, 2008 1:30 AM
@Pradeep ::
Thaaaanku Pradeep :-)
my pleasure too...
Dynamic Divya said...
January 1, 2008 4:02 PM
aaaa hahahahaaa uuuuuhahahaaa
hee heeee heee hee heeee heee
khee kheee kheee kheeeeee
khee kheee kheee kheeeeee
aaaa hahahahaaa uuuuuhahahaaa
hee heeee heee hee heeee heee
ಪೂರ್ತಿಯಾಗಿ hahahahaaa ನಗುವುದು ಮುಗಿದ ಮೇಲೆ hee heeee heee hee heeee...... ಕಮೆಂಟು ಬರೀತಿನಿ kheee kheeeeee
md said...
January 7, 2008 8:41 PM
@md ::
:-) nagnagtaa iri.. khee kheee kheee anno kEke nagu muddaagide...
nimma nagu poorti aagde sadaaa kaala irli.. :-)
Dynamic Divya said...
January 16, 2008 6:58 PM
ನಮಸ್ತೆ,
ನಿಮ್ಮ ಬ್ಲಾಗ್, ಬರಹ ಎರಡೂ ಚೆನ್ನಾಗಿದೆ. ಅಂದಹಾಗೆ ಈ ಲೇಖನದಲ್ಲಿ ಎಲ್ಲೂ ದೇವೇಗೌಡರ ಫೋಟೊ ಕಾಣಿಸಲಿಲ್ಲ. ಅವರನ್ನು ನೋಡಿ ನಗುವುದನ್ನು ಪ್ರಾಕ್ಟೀಸ್ ಮಾಡಬಹುದಿತ್ತು.
ಧನ್ಯವಾದಗಳು.
ಜೋಮನ್.
ಜೋಮನ್ said...
February 8, 2008 5:19 PM
hey divya how ru long time .. hope u remmeber me :-)
sands said...
February 17, 2008 10:18 AM
ha haha hahahaha hahaha haha haha hahah ahah ha ha hagh hagh/////
Divya avare ome nakkubidi anta helidrella..
And barah tumba chennagide
Mallikarjun
ಮಲ್ಲಿಕಾಜು೯ನ ತಿಪ್ಪಾರ said...
February 28, 2008 1:30 AM
ಪ್ರಿಯ ದಿವ್ಯಾ ಅವರೇ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
- ಅಮರ
ಅಮರ said...
March 7, 2008 10:33 PM
ಧನ್ಯನಾದೆ ದಿವ್ಯಾ....
ನಿಮ್ಮ "ಬಹುಮುಖ"ಪ್ರತಿಭೆಗೆ ಮರುಳಾಗಿದ್ದೇನೆ. ಸುಸ್ತಾಗಿ ಸುಣ್ಣವಾಗಿದ್ದೇನೆ. ನಿಮ್ಮ ಮುಖನನ್ನಂತೂ ನಾನು ನೋಡಿಲ್ಲ. ಇವಿಷ್ಟರಲ್ಲಿ ಒಬ್ಬರಿದ್ದಂತಯಂತೂ ಇರೋಕೆ ಸಾಧ್ಯವೇ ಇಲ್ಲ ಬಿಡಿ.
ಎನಿವೇ ವೆರಿ ನೈಸ್
ಕೊನೆಯದಾಗಿ...
ಮುಖ ನೋಡಿ ಎಂದೂ ಮಣೆ ಹಾಕಬೇಡಿ...
ಥ್ಯಾಂಕ್ಯೂ ಮೇಮ್...
ಪೂರ್ಣ ವಿ-ರಾಮ said...
March 10, 2008 11:22 PM
ಯಾಕೋಪಾ!!!!! ಡಯ್ನಮಿಕ್ ಗಾಡಿ ಮುಂದೆ ಹೊಗ್ತಿಲ್ಲ...... ನಕ್ಕು ನಕ್ಕು ಇಲ್ಲೆ ಸುಸ್ತಾಗೊಯ್ತಾ????
gubbacchi said...
March 20, 2008 7:14 PM
oye, next post.....
Parisarapremi said...
March 21, 2008 5:23 AM
@Joman::
Namaste Joman.. thaaaakuu.. :-)
heheheheeeee Devegowdra photo haakidre naav nagbOdittu.. aadre alliro eraD muddaaada makkaLa gathi???? paapa hedri avu nagtirlilla.. adikke haakilla..
:-D
nimma commentige nanna dhanyavaadagaLu! :-)
@Mallikarjun ::
:-) :-) innu nagtaaaneee iri...
naanu heLde idruunuu nagtaa iri :-D
yaaraadru 'hucchaa nimge?' andrunuuu avrunuu noDi nagi... :-D
heheheeee comedy irutte!!
nam meshtru heLtaare yaavaaglu "Baduku bahaLa sundara allave? "
haage!!!
And 'barah tumba chennagide' annodakke nandondu hruthpoorvaka vandane! :-)
@Amara ::
Priya AmarakavigaLE...
namaskaara... naanu soooooooooperaagidini...
date-u, time-u, place-u takkante sikkid aaytallaaa...
eega nan article ge comment maaDi..
inti,
-Tarle Divya
@PoorNa vi-Raama ::
Namaskaara PoorNa Vi-Raama..
nandu "bahumukha" allappa.. iro ond mukhada comedy avtaaraanE sahislaarde saakappaaaaaa antaare.. inna bahumukha aadre??? :-D
Thaaaanku nim 'anyway very nice' treatment ge.. :-)
ಮುಖ ನೋಡಿ ಎಂದೂ ಮಣೆ ಹಾಕಬೇಡಿ...
mukha noDade maNe haakbOdaa?? :-D
sorry! bad joke!!
sumne tarle ge anta...
@gubbacchi ::
Uuuuuuuuhahahahaaaa
sooooooooper comment gubbacchi!!
gubbacchi nan favorite.. adikke anta dynamic bhramaastra baLsalla!!
hehehee nakkuuu nakkuu sust aagillaa... bere naaDalli bere subjects jotey dynamically allocate aagiddarinda, dynamic gaaDi salpa static aagittu...
:-)
eega back to NAMMANAADU!!
sadhyadalle gaaDi grrrrrrrrrrrrroooomm anta ODalide..
hatti neevunooo....
:-)
@Parisarapremi ::
Yesssss!!!!
atiiii sheeeeghradallE nireeekshisiiii....
hehee nangottu eega en heLtideeri anta.. "bari modlu.. amel maataaDu.. hopeless fellow togond bandu..." :-D correct-aaa... ;-)
Dynamic Divya said...
March 21, 2008 1:36 PM
ಓಹೋಹೋಹೋ ತಾವು ಸಿಕ್ಕಸಿಕ್ಕಂಗೆ ಕಿಸಿಯೋದಲ್ದೆ ಊರಲ್ಲಿದ್ದೌರೆಲ್ಲ ಕಿಸೀಬೇಕಾ....?
ನೀನಂತೂ ಎಲ್ಲಂದ್ರಿಲ್ಲ ಅಲ್ಲಿ ಕಿಸೀತೀಯ, ಹಾಗಂತಾ ನಿನಗೆ ಕಾಣ್ಸೌರೆಲ್ಲ ಕಿಸೀಬೇಕಾ......?
ನಿಂದೊಳ್ಳೆ ಕತೆಯಾಯ್ತು....
ಓಕೆ ಕಿಸಿ ಯಾರು ಬೇಡ ಅಂದಿದ್ದು... ಅದ್ರೆ ನಿನ್ ತರ ಸಿಕ್ಕಸಿಕ್ಕಂಗೆ ಕಿಸ್ದ್ರೆ ಮುಗ್ದೆ ಹೋಯ್ತು ಕತೆ.
ನಿಂಗಂತೂ ಮಗು ಅಂತಾರೆ.... ಆಮೇಲೆ ನಿನ್ ಜೊತೆ ನಮ್ಮನ್ನೂ ಅದೇ catagoryಗೆ ಸೇರಿಸ್ತಾರೆ ಅಷ್ಟೇ..
ಅಲ್ಲ ನಾನು ಒಪ್ಪ್ತೀನಿ, ಜನ ನಗಬೇಕು... ನಗ್ತಾ ನಗ್ತಾ ಮಾತಾಡ್ಸ್ಬೇಕು ಅಂತಾ ಬಟ್ ನೀನ್ ನಕ್ಕಂಗೆ ನಕ್ರೆ ಮುಗ್ದೆ ಹೋಯ್ತು...
ಅಲ್ಲ ಕೋತಿ ಹೇಗೆ ತಾನೆ ಮಂಗ್ಬುದ್ದಿನ್ನ ಬಿಡತ್ತೆ...?
ನೋಡು ನಿನಗೊಂದು ವಿಷಯಾ ಗೊತ್ತಿಲ್ಲ ಕೋತಿಗಳು ಕೋತಿ ಚೇಷ್ಟೆ ಬಿಟ್ಟ ಮೇಲೇನೆ ಮನುಷ್ಯರಾಗಿದ್ದು....
ಆದ್ರೆ ಕೆಲವಕ್ಕೆ ಇನ್ನು ಬಿಡಕ್ಕಾಗ್ಲಿಲ್ಲ.... ಅವಿನ್ನೂ ಮರದ ಮೇಲೆ ಪಲ್ಟಿ ಹೊಡೀತಾನೆ ಇವೆ...
ನೀನು ಅಂತು ಘೋಷಿಸಿ ಬಿಟ್ಟಿದ್ದೀಯ... ನಿನ್ನ ಬುದ್ದಿನ್ನ ಬಿಡಲ್ಲ ಅಂತಾ.... ಓಕೆ ಅದಕ್ಕೆ ಇರಬೇಕು...
ನಿಮ್ಮಪ್ಪ ನಿಮ್ಮನೆ ಹತ್ರಾ ಇರೋ ಮರಗಳನ್ನೆಲ್ಲ ಕತ್ತರ್ಸಿ ಹಾಕ್ಸಿಬಿಟ್ಟಿದ್ದಾರೆ... ಇಲ್ಲಾಂದ್ರೆ ಮರದಿಂದ ಮರಕ್ಕೆ ಎಗ್ರತಾ ಇರ್ತಿದ್ದೆ....
ಇರಲಿ ಬಿಡು.... ಈಗ ಹೇಗೂ ನಿನಗೆ ಲಂಗರೂ ಹಾಕೊವ್ನು ಬಂದಿದ್ದಾನೆ ಅವನೂ ನಿನ್ ಜೊತೆ ಎಗರಕ್ಕೆ ಕಲೀತಾನಾ ಅಥವಾ ನಿನಗೆ ಮನುಷ್ಯ ವರ್ಗಕ್ಕೆ ಎಳೆದು ತರ್ತಾನಾ ಕಾದು ನೋಡುವಾ....
ನಂಗೆ ಅನ್ಸತ್ತೆ ೨ನೇ ಕೆಲ್ಸ ಸ್ವಲ್ಪಾ ಕಷ್ಟದ್ದೆ ಅಂತಾ .....
ಮತ್ತೆ ಈಗ ಸೀರಿಯಸ್ ಆಗಿ ನೀನು ಹೇಳಿದ್ರ ಬಗ್ಗೆ ಚಿಂತೆ ಮಾಡಿದ್ರೆ ನಗ್ದೆ ಇರೋದಿಕ್ಕೆ ಅವ್ರಿಗೆ ತುಂಬ ಕಾರಣಗಳಿರಬಹುದು... ಅವ್ರ ಹಲ್ಲು ಎಗ್ರಿರಬಹುದು... ಹಲ್ಸೆಟ್ಟನ್ನ ಮನೇಲಿ ಮರೆತು ಬಿಟ್ಟು ಬಂದಿರಬಹುದು.... ಆದ್ರೆ ಇವೇನೂ ಕಾರಣ ಇಲ್ದೆ ನಗ್ದಿದ್ರೆ ಎಲ್ಲೋ ಏನೋ ಎಡವಟ್ಟಾಗಿದೆ ಅಂತಾ ಅರ್ಥ....
ಹೌದು ಕೆಲವರು ಇರ್ತಾರೆ ಎದ್ರುಗಡೆ ಟಾಮ್ & ಜೆರ್ರಿ ಬರ್ತಾ ಇದ್ರೂ ಹಳೇ ಕರುಳಿನ ಕೂಗು ಫಿಲ್ಮ್ ನೋಡೋ ತರ ನೋಡ್ತಾ ಇರ್ತಾರೆ... ಇರಲಿ ಬಿಡು... ಅವ್ರು ಸಾಯಿಪ್ರಕಾಶ್ ಫಿಲಂಸ್ ನೋಡಿ ನೋಡಿ ಹಾಗಾಗಿರಲೂಬಹುದು...
ಆದ್ರೆ ನಿನ್ ಕೇಸು ಹಂಗಲ್ಲ ನಿನಗೆ ಎದ್ರುಗಡೆ ತವರಿನ ಸಿರಿ ಫಿಲ್ಮ್ ಹಾಕಿದ್ರೂ ಒಳ್ಳೆ three stooges ನೋಡೋ ತರ ನೋಡ್ತಾ ಇರ್ತೀಯಾ....
ನಾನು ಕೊನೆಲ್ಲಿ ಹೇಳೋದೇನಪ್ಪಾ ಅಂದ್ರೆ ನಿನ್ ಮಂಗ ಚೇಷ್ಟೆಗಳೇ ಎಲ್ಲರಿಗೂ ಇಷ್ಟ....
ಯಾರು ಏನೇ ಹೇಳಿದರೂ ನೀನು ನಿನ್ನ ಕೆಲಸನ್ನ continue ಮಾಡು......
ಮಯೂರ said...
June 2, 2008 4:32 PM