ಅವರ ನಗು...

ಪೂರ್ತಿ ದಿನ ನಕ್ಕೂ ನಲಿದು ಮಾತನಾಡಿ ಹರಟೆ ಹೊಡೆದು ರಜ ದಿನದ ಮಜವನ್ನು ಮೆಲಕು ಹಾಕುತ್ತ ಮನೆಗೆ ವಾಪಸಾಗುವ ಸಮಯ ಬಂದಿತ್ತು..
ಕೋರಮಂಗಲದಿಂದ ದೊಮ್ಮಲೂರಿಗೆ ಹೋಗಲು ಆಟೋ ರಿಕ್ಷಾವನ್ನು ಹುಡುಕಿ ಹೋದ ಹಾದಿಯಲ್ಲಿ ನೆನಪಾದದ್ದು ಮಧ್ಯಾಹ್ನದ ಆಟೋ ಚಾಲಕ ತಂದಿದ್ದ ಕಹಿ ನೆನಪು.. (ಮೆಜೆಸ್ಟಿಕ್ ಇಂದ ಕಾರ್ಪೋರೇಶನ್ ಕೂಡ ಬಂದಿಲ್ಲ, ಆಗಲೇ 30 ರೂಪಾಯಿ ದಾಟಿದ್ದ ಮೀಟರ್ ನೋಡಿ, ಏನೋ ರಾಂಗಾಗಿದೆ ಎಂದು ತಿಳಿದು ಅಲ್ಲೇ ಇಳಿಸಲು ಹೇಳಿದೆವು. ಅವರಿಗೆ ಹೇಗನಿಸಿತೋ, ಇನ್ನು 20 ರೂಪಾಯಿ ಕೊಡಿ ಎಂದು ಬಿಡುವುದೇ? ನೋಡಲು ದೈತ್ಯಾಕಾರ, ಕೆಂಪು ಕಣ್ಣು, ಆಗಾಗ ಪೋಲಿ ಪುಂಡರ ಸೀಟಿ ಹೊಡೆದು ಚಲಿಸುತ್ತಿದ್ದ ಆಟೋವಿನಲ್ಲಿ ತಮ್ಮ Driver details board ಕೂಡಾ ಹಾಕಿಕೊಳ್ಳದೆ ಓಡಿಸುತ್ತಿದ್ದ ಇವರ ಮೇಲೆ ಕೆಟ್ಟ ಕೋಪ ಬಂದಿತ್ತು..) ಈ scene ಕಣ್ಣೆದುರು ಮತ್ತೆ ಬಂದಿತ್ತು.
ರೋಡ್ ದಾಟಲು ನನ್ನ ಕೈ ಹಿಡಿದದ್ದು ವಿಶ್ವಾಸವೋ? ಚೈತನ್ಯವೋ? ಪ್ರೀತಿಯೋ? ಅಥವಾ ಇವೆಲ್ಲವೋ!!! ಏನೋ ಸಮಾಧಾನದಿಂದ ರೋಡ್ ದಾಟಿಯಾಗಿತ್ತು. ಮತ್ತೊಬ್ಬ ಆಟೋ uncleಗೆ "ದೊಮ್ಮಲೂರು ಬರ್ತೀರಾ..?" ಎಂದು ದನಿ ಕೇಳಲು ಕಣ್ಣುಗಳು ಒಳಗೆ ಏನನ್ನೋ ಹುಡುಕುತ್ತಿದ್ದವು.. Driver details ಬೋರ್ಡ್??? :-? hmmmm ಇರಬಹುದು!!!

ಸಮಯ ಮಿಂಚಿನಂತೆ ಕಳೆದು ಹೋಗುತ್ತಿತ್ತು.. ಏಕೆ? ಈ ಪ್ರಶ್ನೆಯೇ ಅಸಂಭದ್ದ!! "ಮಿಂಚಿನಂತೆ ಹೋಯ್ತು, ಯಾಕೆ ಅಂತ ಯಾವನಿಗ್ ಬೇಕು.. ಇಷ್ಟ್ ಕೆಟ್ traffic ಅಲ್ಲಿ ಎಷ್ಟ್ ಚೆನಾಗ್ ಹೋಯ್ತು ಅನ್ನೋದ್ ಬೇಕು.." ಅಂತಿತ್ತು ಬುದ್ಧಿ! :-D

ಪಯಣ ಅದ್ಭುತ! ತಂಗಾಳಿಯ ಚುಂಬನ! ಮಳೆ ಇಲ್ಲದ್ದಿದ್ದರೂ ಏನೋ ಸಂತಸ!
ಇಂದು ಲಸ್ಸಿ ಕೊಂಡ ಕ್ಷಣ ನೆನಪಾಯಿತು.. 5 ರೂಪಾಯಿ ಲಸ್ಸಿಗೆ ಕೊಟ್ಟ 10 ರೂಪಾಯಿ ಆ ಮಕ್ಕಳ ಮೊಗದಲ್ಲಿ ನಗುವ ಸೂಸಿತ್ತು.. ಅದರಲ್ಲಿ ಅವರಿಗೆ ಬರುವ ಲಾಭ ಪ್ರತಿ ಪ್ಯಾಕೆಟ್ಟಿಗೆ 1 ರೂಪಾಯಿ.. ನಾವು ಮಾಡುವ ಕೆಟ್ಟ ಖರ್ಚುಗಳ ಅರಿವಾಯಿತು.. PVRಗಳಂತಹ ಜಾಗಗಳಿಗೆ ಹೋಗಿ ಆ ಕೆಟ್ಟ ಪೆಪ್ಸಿಗೆ ಕೊಡುವ ಕಾಸು -> 100 ರೂಪಾಯಿ.. ಇವೆಲ್ಲ ಸುದೀರ್ಘವಾಗಿ ಮಾತನಾಡುತ್ತಾ ಬಂದ ಕ್ಷಣಗಳು ನೆನಪಾದವು.. ಅಷ್ಟರಲ್ಲಿ ದೊಮ್ಮಲೂರು ಬಂದಿತ್ತು.. ಮೀಟರ್ 48.50 ರೂಪಾಯಿ ತೋರಿಸುತ್ತಿತ್ತು.. ಪರ್ಸಿನಿಂದ 50 ರೂಪಾಯಿ ತೆಗೆದು ಕೊಟ್ಟು ಆಟೋ ಇಳಿಯ ತೊಡಗಿದೆ.. ಆಟೋ uncle ಜೇಬಿಗೆ ಕೈ ಹಾಕಿದ್ದನ್ನು ನೋಡಿ "ಓಹ್.. ಒಂದುವರೆ ರೂಪಾಯಿ ವಾಪಸ್ ಕೊಡುತ್ತಿದ್ದಾರೆ" ಎಂದು ಅಲ್ಲೇ ನಿಂತೆ..

ಆದರೆ ನನ್ನ ಕೈಗೆ ಅವರು ಕೊಟ್ಟಿದ್ದು ಒಂದುವರೆ ರೂಪಾಯಿ ಅಲ್ಲ! 20ರ ಒಂದು ನೋಟು, 10ರ ಮೂರು ನೋಟು.. ಅಲ್ಲೇ ನಿಂತು ಆ ಕಾಸನ್ನು ವಾಪಸ್ ಮಾಡಿ, "ನಾ ಕೊಟ್ಟಿದ್ದು 50 ರೂಪಾಯಿ.." ಎಂದೆ..
ಆಗ ಅವರು ತಮ್ಮ ಕೈಲಿದ್ದ 50 ರೂಪಾಯಿ ನೋಟನ್ನು ನೋಡಿ 100 ಕೊಟ್ಟಿದ್ದೆ ಎಂದಂದುಕೊಂಡಿದ್ದ ಅವರು ಕೊಟ್ಟದ್ದು ... ಒಂದು ನಗು... ಮುಗ್ದ ನಗು.. ಆ ನಗುವಿನಲ್ಲಿ ಅದೆನಿತ್ತೋ.. ನೋಡಿದ ನನಗೆ ತುಂಬ ಖುಷಿ ಕೊಟ್ಟಿತು...... There was gratefulness.. There was thankfulness... There was bliss... :-) ಅವರ ನಗು... :-)
ಆಮೇಲೆ ಬೈದು ಕೊಂಡಿರಬಹುದು "ಇದ್ಯಾವ್ದೋ ಲೂಸು, ವಾಪಸ್ ಕೊಡ್ತು ಸದ್ಯ!!" ಅಂತ.. ಇಲ್ಲಾ ಹರಸಿರಬಹುದು "ಪಾಪ ಕೊಡ್ತು!" ಅಂತ... ಇದ್ಯಾವ್ದೂ ನನಗೆ ಮುಖ್ಯವಲ್ಲ...
ನನಗೆ ಮುಖ್ಯವಾದದ್ದು... "ಅವರ ನಗು...."

ವಿ. ಸೂ. ಪ್ರತೀ ಸರ್ತಿಯೂ ನನ್ನ ಪೋಸ್ಟ್ ಗಳಲ್ಲಿ ಫೋಟೋಸ್ ಇರುವ ರೂಢಿಯಾಗಿದೆ, ಆದರೇ ಈ ಲೇಖನಕ್ಕೆ ಅದಿಲ್ಲ... ಬೇರೆ ಯಾವ pic ಹಾಕಲು ಮನಸಾಗಲಿಲ್ಲ.. ಅವರ ನಗುವನ್ನು ಸೆರೆ ಹಿಡಿದು ಹಾಕುವ ಭಾಗ್ಯ ನನ್ನ cell phoneಗೆ ಇರಲಿಲ್ಲ, ನನ್ನ ಕಣ್ಣಿಗಿದೆ.. :-) ಆದ್ದ ಕಾರಣ, no pics for the article.. :-)

12 comments:

nagu(goona)nagu(goona)nagu(goona)nagu(goona)nagu(goona).... :-) :-) :-) chukki taare naachuvanthe omme nee nagu.... matte goona goona goona.... :-)

PVRಗಳಂತಹ ಜಾಗಗಳಿಗೆ ಹೋಗಿ ಆ ಕೆಟ್ಟ ಪೆಪ್ಸಿಗೆ ಕೊಡುವ ಕಾಸು -> 100 ರೂಪಾಯಿ.. hmmm en maadodu...kottonu kodangi..iskondodu innu dodd kodangi... ...wastegaLu...

May 5, 2008 10:20 PM  

May 6, 2008 11:00 PM  

ಆಟೋ ಅಂಕಲ್ ಬಗ್ಗೆ ಒಳ್ಳೇ ಮಾತು ಬರೆಯೋರೂ ಇದಾರೆ ಅಂತಾಯ್ತು.

ನಂಗ್ಯಾಕೋ ನಿನ್ ಮೇಲೇ ಡೌಟು, ನೀನು ನೂರು ರೂಪಾಯಿಯೇ ಕೊಟ್ಟು ಅವನ ಹತ್ರ ಟೋಪಿ ಹಾಕಿಸಿಕೊಂಡು, ಇಲ್ಲಿ ಅವನ ಕೀರ್ತಿ ಕೊಂಡಾಡ್ತಾ ಇದ್ದೀಯ ಅಂತ.

May 7, 2008 1:14 PM  

ಚೆನ್ನಾಗಿದೆ!!
ಈ ಬರವಣಿಗೆಯೇ ನಿಮ್ಮ ಅನುಭವದ ಸೊಗಸಾದ ಚಿತ್ರಣ ಮೂಡಿಸಿದೆ, ಬೇರೆ ಚಿತ್ರದ ಅವಶ್ಯಕತೆ ಇಲ್ಲ.

May 7, 2008 2:28 PM  

ನನಗ್ಯಾಕೊ ಡೌಟು .... ಅಲ್ಲ ಕಾರ್ಪೊರೇಷನ್ ಇಂದ ದೊಮ್ಮಲೂರು ಅಬ್ಬಬ್ಬ ಅಂದ್ರೆ ೫ ಕಿ.ಮೀ ಇದೆ ೪೮.೫೦ ಜಾಸ್ತಿ ಆಯ್ತು ....... ಕೊಟ್ಟು ಬಂದಾಯ್ತಲ್ಲ .......... ಹೊಗ್ಲಿ ಬಿಡಿ :))

May 7, 2008 6:08 PM  

welcome back dyno ! sakhath article-u....oLLe auto drivers gaLU irtaare anta ivattu gottaytu nodu !

May 13, 2008 7:52 PM  

@Sridhara ::
goona gooona?!! :-)
heheee..
aa auto uncle hatra hogi "gooona gooona..." anta naan haaDdre koTTiro 50 roopaay na nange vaapas koT "tolgaache.." antaare.. neen haaDdreeee goona aagOvargu hoDdu ODstaare.... :-D
PVR bagge -- koTTonu koDangi, iskonDonge hosa angi!!!!!!!


@Srikanth ::
neenu UKG ge hogu bega LKG pass maaDi, aaga ninge "hmmm" annod biT a b cd.. ella heLkoDtaare....
hmmmm ante.. karma!

@Parisarapremi and Amara ::
"anumaanam peddarOgam"
dont anumaana I say!!!
nijvaaglu aa uncle oLLevru..


@Manu ::
:-) dhanyavaada!
nimgoo ond one-liner shot-u... :-D
"beauty lies but in the eye of the beholder"
Oduga dore ge nanna vandanegaLu..
:-)


@Lakshmi ::
Thaaaanku Lux.. :-)
hehee nin auto charitre articles odide, sooooper panga togotya, nan dodddddd comment pending adikke..

oLLe autodrivers irbOdu, autodrivers oLLevruu irbOdu!
nannan nambuuu plzzz plzzzzz :-D

May 15, 2008 10:49 PM  

nangoo doubt-u ... adyaak elrigoo divyan mele doubt-u antha doubt-u!!

May 19, 2008 1:05 PM  

bhrame.

May 19, 2008 4:02 PM  

@Vijaya ::
doubt paDor melE doubt paDo nimmele nange doubt bartide....


@parisarapremi ::
bhrameyembudellaaaa bhrame kandhaa...

May 19, 2008 9:49 PM  

ಈಗಿನ ಕಾಲದಲ್ಲೂ ಇ೦ತಹ ಆಟೋ ಡ್ರೈವರ್ಸ್ ಇದ್ದಾರ? ನೀವು ಅದೃಷ್ಟವ೦ತರು ಅ೦ತಹ ಅ೦ಕಲನ್ನು ಭೇಟಿಯಾದದ್ದಕ್ಕೆ.
ಅಲ್ಲಾ ನೀವು ಹೇಳಿದ್ದು ನಿಜವಾಗಿಯೂ ಸತ್ಯಾನ?

June 18, 2008 12:27 AM  

hahahaha super agidhe........ nijavaglu loosu....:)

March 16, 2009 3:46 PM  

Newer Post Older Post Home