ಬೆಂದಕಾಳೂರು ಅಂತ ಯಾಕಾದ್ರೂ ಹೆಸ್ರಿಟ್ಟ್ರೋ..??!!! ಛೆ! ಅಕ್ಷರಸಃ ಬೆಂದು ಹೋಗ್ತಾ ಇದೆ!!!!
ಮೆಟ್ರೋ ಅಂತೆ ಅವನಜ್ಜಿ ಪಿಂಡ ಅಂತ ಅದೆಷ್ಟ್ ಸರ್ತಿ ಬ್ಯಕೊಂಡಿದೀವೋ... ನಾವೆಲ್ಲ ಸುಮ್ನೆ ಹೆಸರಿಗೆ ಕಣ್ರೀ ಪರಿಸರಪ್ರೇಮಿಗಳು, ಪರಿಸರದ ಬಗ್ಗೆ ಕಳಕಳಿ ಇರೋರು ಅಂತ ಕೊಚ್ಕೊಳೋದು! ಅಸಲಿಗೆ ನಾವೂ ಕೂಡ "ಆ" ಧ್ವಂಸಕರನ್ನು ನೋಡಿ ಸುಮ್ಮನಿರುವರೇ! ಜಾಸ್ತಿ ಅಂದ್ರೂ ಶಾಪ ಹಾಕ್ತೀವಿ! ಬ್ಲಾಗ್ ಬರೀತೀವಿ.. ಇನ್ನೂ ಜಾಸ್ತಿ ಅಂದ್ರೆ, ಮರಗಳ್ನ ತಬ್ಬಿ ಹಿಡಿದು ನಿಂತ್ಕೋತೀವಿ...
ನಾವೇನಾದ್ರೂ ಆಗಿನ ಕಾಲದ ಮಹಾದೇವಿ ಅಮೃತಾದೇವಿ ಆಗೋಕ್ ಆಗುತ್ತಾ??! ಆ ಮಹಾ ತಾಯಿ ಕಥೆ ನೀವು ಕೇಳಿದ್ದರೂ ಇನ್ನೊಮ್ಮೆ ಇಲ್ಲಿ ಬರೀತೀನಿ!
ಅದೆಷ್ಟು ಸುಂದರ ವನಗಳ ಬೀಡಾಗಿತ್ತೋ ನಮ್ಮ ಬೆಂಗಳೂರು! ಅದೆಷ್ಟು ಕೋಟಿ ಜೀವ/ಜೀವಿಗಳಿಗೆ ಉಸಿರಾಗಿತ್ತೋ ಇಲ್ಲಿನ ಹಸಿರು ಸಿರಿ!! ನಮ್ಮ ಕನ್ನಡ ಜನ, ತಂಪಾದ ತಾಣಗಳು, ನಿರ್ಭಯ ಬೀದಿಗಳು, ಕಣ್ಣಾಡಿಸುವಷ್ಟೂ ದೂರಕ್ಕೂ ಹಸಿರೋ ಹಸಿರು!

ಚಿಲಿಪಿಲಿ ಗುಬ್ಬಚ್ಚಿಗಳು, ಅದೆಷ್ಟೋ ಪಕ್ಷಿಗಳ ಕಲರವ, ಕಾಗೆಗಳು ಕಾ ಕಾ ಅನ್ನೋದು ಕೂಡ ಇಂಪು! ಸ್ವರ್ಗಕ್ಕೆ ನಾಚಿಕೆಯಾಗಬೇಕಾಗಿತ್ತು! ಅಸ್ಥಮಾ ಅಂಥ ರೋಗ ಗೊತ್ತಾಗಿದ್ದೇ ಬೇರೆ ಊರಿಂದ ಬಂದ ಯಾವೋ ಹಡಬೆಗಳಿಂದ! ಸ್ವಚ್ಛ ವಾತಾವರಣ... ಕಲುಷಿತ ಅಂದ್ರೆ ಏನಪ್ಪಾ ಅಂತಾನೆ ಗೊತ್ತಿಲ್ಲ! ನಿರಾಳ ಜೀವನ ನಮ್ಮ ಊರಲ್ಲಿ. ನಮ್ಮ ಬೆಂಗಳೂರು!


ಚಿಲಿಪಿಲಿ ಗುಬ್ಬಚ್ಚಿಗಳು, ಅದೆಷ್ಟೋ ಪಕ್ಷಿಗಳ ಕಲರವ, ಕಾಗೆಗಳು ಕಾ ಕಾ ಅನ್ನೋದು ಕೂಡ ಇಂಪು! ಸ್ವರ್ಗಕ್ಕೆ ನಾಚಿಕೆಯಾಗಬೇಕಾಗಿತ್ತು! ಅಸ್ಥಮಾ ಅಂಥ ರೋಗ ಗೊತ್ತಾಗಿದ್ದೇ ಬೇರೆ ಊರಿಂದ ಬಂದ ಯಾವೋ ಹಡಬೆಗಳಿಂದ! ಸ್ವಚ್ಛ ವಾತಾವರಣ... ಕಲುಷಿತ ಅಂದ್ರೆ ಏನಪ್ಪಾ ಅಂತಾನೆ ಗೊತ್ತಿಲ್ಲ! ನಿರಾಳ ಜೀವನ ನಮ್ಮ ಊರಲ್ಲಿ. ನಮ್ಮ ಬೆಂಗಳೂರು!

ಇವೆಲ್ಲ ನಾನ್ ಹೇಳಿದಲ್ಲ ರೀ! ನಮ್ಮ ಅಜ್ಜಿ ತಾತಾ ಹೇಳಿದ್ದು! ಅವರ ಮಾತುಗಳಲ್ಲಿ ಆದಷ್ಟು ಹಾಗೆ ಇಟ್ಟಿದೀನಿ, ಸಲ್ಪ ಎಡಿಟಿಂಗ್ ಮಾಡಿದೀನಪ್ಪ, ಅವ್ರು ಬೈದ ಹಾಗೆ ಪರದೇಶದಿಂದ ಬಂದು ನಮ್ಮ ಊರನ್ನು ನಾಶ ಮಾಡಿದವರಿಗೆ ಇಲ್ಲಿ ಬೈಯ್ಯುವುದು ಹಾಗು ಈಗ ಬಯ್ಯುವುದು ಉಪಯೋಗವಿಲ್ಲದ ಕಾರ್ಯ!!
ಇವ್ರು ಹೇಳಿದಷ್ಟು ಚಂದವಾಗಿತ್ತಾ ನಮ್ಮ ಬೆಂಗಳೂರು ಅಂತ ನಿಜವಾಗಲು ಅನುಮಾನ ನಂಗೆ! ಕೋಲಾರದಿಂದ ಹೊಸಕೋಟೆ ಗೆ ಸರಾಸರಿ ಒಂದು ಘಂಟೆ ಪ್ರಯಾಣ, ಆದ್ರೆ ಹೊಸಕೋಟೆ ಇಂದ ಇಂದಿರಾನಗರಕ್ಕೆ ಎರಡೂ ವರೆ ಘಂಟೆ! ಅಷ್ಟು traffic ಮಯ ಕರ್ಮಕಾಂಡ! ಆ ಧೂಳು ಆ ದರಿದ್ರ ಹಾರ್ನ್ ಗಳು!

ಅಷ್ಟು ಸೌಂಡ್ ಸಾಕಾಗಲ್ಲ ಅಂತ "ಸೌಂಡ್ ಹಾರ್ನ್ ಓಕೆ ಪ್ಲೀಸ್" ಅಂತ ಬೋರ್ಡ್ ಬೇರೆ!! ಇನ್ನೊಂದಷ್ಟು ಕೆಟ್ ಮನುಷ್ಯನ ಕಿವಿಗಳು ಅಲ್ಲದೆ, ಪಾಪದ ಪ್ರಾಣಿ ಪಕ್ಷಿಗಳ ಕಿವಿಗಳು ಒಡೆದು ಹಾಳಾಗ್ ಹೋಗ್ಲಿ ಅಂತ! 
"ಗಲೀಜ್ ಇದ್ದೀಯ ನಿಮ್ಮೂರಲ್ಲಿ, ಅಯ್ಯೋ ನಮ್ಮ ಬೆಂಗಳೂರು ಖಾಲಿ ಇದೆ ಬನ್ರಪ್ಪಾ, ನೀವಿಲ್ಲಿ ಎಷ್ಟ್ ಕಸ ಮಣ್ಣು ಮಸಿ ಬೇಕಾದ್ರೂ ಹಾಕಬೋದು, ನೀವೇ ಕಷ್ಟ ಪಟ್ ನೋಡ್ಕೊಂಡಿರೋ ಊರಿದು! ಎಲ್ಲಿ ಬೇಕಾದ್ರೂ ಉಗುಳ್ಬೋದು, ನಿಮ್ಮ ಕೆಟ್ಟ ಶ್ವಾಸಕೋಶದಿಂದ ಬಂದ ಕಫಾ ಉಗಿಯೋಕೆ ಬೆಂಗಳೂರಿಗಿಂತ ಊರು ಬೇಕಾ? ಎಲೆ ಅಡಿಕೆ ಹಾಕೊಂಡ್ ಯಾರಿದಾರೋ ಅನ್ನೋದನ್ನೂ ನೋಡದೆ ಉಗಿಯೋಕೆ BMTC ಬಸ್ಸಿಗಿಂತ ಬಸ್ಸು ಕಿಟಕಿ ಬೇಕಾ? ನೀವು ಉಪಯೋಗಿಸಿ ಬಿಟ್ಟ ಅದು ಇದು ಎಲ್ಲಾ ಮನೆ ಕಸ ಎಸೆಯೋಕೆ ಬೆಂಗಳೂರಿನ ಬೀದಿಗಿಂತ ಬೀದಿ ಬೇಕಾ? ಒಂದು ಎರಡು ಮಾಡೋಕೂ ಕೂಡ ಬೆಂಗಳೂರು ಸೈಡ್ ಬೀದಿಗಳು ಬೆಸ್ಟ್ ಕಣ್ರಪ್ಪಾ ನಿಮಗೆ! ನಿರ್ಮಲ ಅಂತ ಹೆಸರು ಮಾತ್ರ, ಅಕ್ಷರಸಃ ವಿರುದ್ಧ ಜಾಗ ಅದು ನಿಮ್ಮ ಹೊಲಸನ್ನು ಮಾಡಲಿಕ್ಕೆ, ಅಲ್ಲಿನ ಗೋಡೆಗಳು ನಿಮ್ಮ ವಂಶಸ್ಥರು ಕಟ್ಟಿಸಿದ್ದು ಅಲ್ವೇ? ಅದರ ಮೇಲೆ ಏನ್ ದರಿದ್ರ ಬೇಕಾದ್ರೂ ಗೀಚಿಕೊಬಹುದು, ನಿಮ್ಮ ಮನೆಯವರಿಗೆ (ಅ)ಸಭ್ಯ ಸಂದೇಶಗಳು (ಇಲ್ಲಿ "ಅ" ಅನ್ನೋದು silent, ನೀವೇನ್ ತಲೆ ಕೆಡಸಿಕೋ ಬೇಕಿಲ್ಲ) ಬರೆಯೋಕೆ ಅದ್ದಿಕ್ಕಿಂತಾ ಜಾಗಾನಾ?
ಹಾ, ನಿಮ್ಮದೆ ಊರು, ಏನು ಸಂಕೋಚ ಮಾಡ್ಕೊಳ್ದೆ ಮನಸಿಗೆ ಬಂದಷ್ಟು ಗಲೀಜ್ ಮಾಡ್ಬೋದು! ನಿಮ್ಮ ಕೇರಿಯವರನ್ನೂ ಕರೆ ತನ್ನಿ ನಿಮ್ಮ ಊರೋರನ್ನೂ ಕರೆ ತನ್ನಿಪಾ, ಈ ಊರು ನಿಮ್ಮದೇ! "
ಅಂತ ಪರದೇಶದಿಂದ, ಪರನಾಡಿನಿಂದ ಬಂದು ನಮ್ಮನ್ನೇ ಪರದೇಶಿಗಳಂತೆ ಮಾಡಿರುವ ಎಲ್ಲಾ ಜೀವಿಗಳಿಗಿರುವ ಸಂದೇಶ!ಸಂದೇಶವನ್ನು ಕೊಟ್ಟವರು --> ನೊಂದ ಬೆಂದ ಬೆಂಗಳೂರು ಜೀವಿಗಳು!
ನಮ್ಮ ಊರು ನಿಮ್ಮ ಊರು ಅನ್ನೋದನ್ನೂ ಬಿಟ್ಟು ಬಿಡೋಣ, ನಾವೆಲ್ಲಾ ಒಂದೇ ಜಾತಿ ಒಂದೇ ಕುಲ ಒಂದೇ ಮತ, ನಾವು ಮನುಜರೂ, ನಾವು ಮನುಜರೂ..
ನಮ್ಮ ದೇಶ ನಮ್ಮ ಪರಿಸರ! ಹಾ! ಈಗೇನು? ಭಾರಿ ಬದಲಾವಣೆ ಆಗಿಬಿಡುತ್ತಾ? ಎಲ್ಲರ ಅಂತರಂಗದ ಕಣ್ಣು ಧಿಡೀರ್ ಅಂತ ತೆರೆದು ಪರಿಸರ ರಕ್ಷಣೆಗೋಸ್ಕರ ಮುಂದಾಗ್ತಾರ ಜನ? No Hopes buddy!!
ಇರುವ ಜಾಸ್ತಿ ಪಾಲು ಜನ ತಮ್ಮ comfort ಬಿಟ್ಟು ಈಚೆ ಬರಲಾರರು! AC ಬಿಟ್ಟು ಒಂದ್ ಘಳಿಗೆನೂ ಇರಲಾಗಲ್ಲ ಸ್ವಾಮೀ! ಮರಗಳು ಕೊಡೊ ನೈಸರ್ಗಿಕ ತಂಗಾಳಿ ಯಾವ್ ನನ್ ಮಗನಿಗೆ ಬೇಕು?!
"ಎಷ್ಟ್ ಮರಗಳ್ನ ತೆಗೀಬೇಕಪ್ಪ, ನಂಬರ್ ಕೊಡು ಸೈನ್ ಹಾಕ್ತೀನಿ" ಅನ್ನುವ ಕಂತ್ರಿ ಮಂತ್ರಿಗಳು, "ನಮ್ಗೆನಪ್ಪ ರೊಕ್ಕ ಬಂದ್ರ ಆತು" ಅಂದು ಮರಗಳನ್ನು ಚಿಂದಿ ಮಾಡುವ ರೋಜ್ ಕೀ ರೋಟಿ ಸಂಪಾದಿಸುವ ಕೆಲಸಗಾರರು! "ಓ ಹೌದಾ, ಅಷ್ಟ್ ಮರಗಳ್ನ ಕಡೀತಾರಂತಾ? ಛೆ ಬಾಳ ಅನ್ಯಾಯ ಕಣ್ರೀ, ಆದರು ಮೆಟ್ರೋ ಬರುತ್ತಲ ಬಿಡ್ರೀ ಅರಾಮಾಗುತ್ತೆ" ಅನ್ನೋ ಅಜ್ಞಾನಿಗಳು!
ಅಲ್ಲಿ ಇಲ್ಲಿ ಇಣುಕಾಡುವ ನಿಜವಾದ ಪರಿಸರಪ್ರೇಮಿಗಳ ಮಧ್ಯೆ ಇರುವವರು ಇಂಥಾವರೇ! ಅಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಕಂಡು ಬರುವ ಮಹಾನ್ ಆತ್ಮಗಳು - ಅಮೃತಾದೇವಿಯಂಥವರು!
ಇವರಂಥವರು ಬೀದಿಗೊಬ್ಬರು ಇದ್ದರೂ, ನಮ್ಮ ಲಾಲ್ ಬಾಗ್ ಬೋಳ್ ಬಾಗ್ ಆಗುವುದನ್ನು ತಪ್ಪಿಸಬಹುದು! ವಿಸ್ಮಯ ಅಂತ ಅದಿಕ್ಕೇನಾ ಹೇಳೋದು? ಅದ್ಹೇಗೆ ಮುಂದಾಗುವುದನ್ನು ಅರಿತು ಹೆಸರಿಡುತ್ತಾರೋ! ಲಾಲ್ ಬಾಗ್ ತನ್ನ ಮರಗಳನ್ನ ಕಡೆಸಿಕೊಂಡು ಮರಗಳ ರಕ್ತದ ಓಕುಳಿಯಲ್ಲಿ ಮಿಂದು ಲಾಲ್ ಆಗುವುದನ್ನು ಹೇಗೆ ಮುಂಚೆ ಗ್ರಹಿಸಿದ್ದರೋ!! ಲಾಲ್ ಬಾಗ್!!!!!
hmmm!!!
ಅಮೃತಾದೇವಿ.
ಹೆಸರು ಕೇಳಿದೀರಾ? ಜೋಧಪುರದ ಖೆಜರ್ಲಿ ಹಳ್ಳಿಯ ವಾಸಿ! ಆ ಹಳ್ಳಿಯಲ್ಲಿ ಖೆಜ್ರಿ (Prosopis cineraria) ಮರಗಳು ಹೇರಳವಾಗಿದ್ದವು! 
ಹದಿನೇಳನೇ ಶತಮಾನದ ಘಟನೆಯಿದು........
ಮರುಭೂಮಿಯಾದರೂ ಹಸಿರ ತಾಣ! ಬಿಷ್ಣೊಯಿ ಜನರು ವಿಷ್ಣು ಭಕ್ತರು. ಇವರು 29 (ಹಿಂದಿಯಲ್ಲಿ ಬೀಸ್ + ನೋ ಅಂದರೆ 20 + 9 ಎಂದರ್ಥ) ತತ್ವಗಳ ಆರಾಧಕರು - ವನ, ವನ್ಯ ಜೀವಿ, ನೀರು ಗಾಳಿ ಒಟ್ಟಾರೆ ಪ್ರಕೃತಿ ರಕ್ಷಣೆಗೆ ಸಂಬಂಧ ಪಟ್ಟವು. ಮಹಾರಾಜ ಅಭಯ್ ಸಿಂಗ್ ಠಾಕುರ್ ಆಳಿದ ಕಾಲ ರಕ್ತ ಹೋಮವಾದ ಕಾಲ. ಅವನ ಆಜ್ಞೆಯಂತೆ ಮರಗಳನ್ನು ಅರಮನೆಗಾಗಿ ಕಡಿಯುವ ಸ್ಥಿತಿ ಬಂದೊಡಗಿತು.
ಅದೊಂದು ಕರಾಳ ದಿನ!
ಅಮೃತಾ ದೇವಿ ತನ್ನ ಮೂರು ಮಕ್ಕಳೊಡನೆ ಮರ ಕಡಿಯುವವರನ್ನು ತಡೆದಳು. ಮೂರು ಮಕ್ಕಳಾದ ಆಸು, ರತ್ನಿ, ಭಾಗೂಬಾಯಿ ಚಿಕ್ಕವಾದರು ಬುದ್ಧಿ ಅಪಾರ. ರಾಜಾಜ್ಞೆಯನ್ನು ಮೀರಿ ಮರಗಳನ್ನು ಹಿಡಿದು ಕಡಿಯಕೊಡದಂತೆ ಮರಗಳನ್ನು ತಬ್ಬಿ ಹಿಡಿದು ನಿಂತರು! ಪ್ರಾಣ ಕೊಟ್ಟೇವು ಮರ ಬಿಡೆವು ಎಂಬ ಮಂತ್ರದ ಪಟ್ಟು ಹಿಡಿದರು!
ಅವರ ದೇವನಗರಿ ಭಾಷೆಯಲ್ಲಿ ಕೂಗಿದರು : "ಸರ್ ಸಾಂತೆ ರೂಖ್ ರಹೇ ತೊಹ್ ಭೀ ಸಸ್ತೋ ಜಾನ್" - ಮರ ಉಳಿಯುವುದಾದರೆ ತಲೆ ಹೋದರೂ ಪರವಾಗಿಲ್ಲ ಎಂಬರ್ಥ. ತಲೆ ಕೊಟ್ಟು ಮರಗಳನ್ನು ಉಳಿಸಿಕೊಳ್ಳುವ ಯತ್ನ. ಮರ ಉಳಿಸಲು ಹೋಗಿ ತನ್ನ ತಲೆಯನ್ನೇ ಉರಳಿಸಿಕೊಂಡ ದೇವತೆ! ಮಕ್ಕಳೂ ಪುಟ್ಟ ದೇವತೆಗಳು. ಮರಕ್ಕೆ ಅಂಟಿಕೊಂಡಿದ್ದಾಗಲೇ ಕೊಡಲಿಯು ರಾಚಿತ್ತು ರಕ್ತ, ಕಡಿದಿತ್ತು ನಾಲ್ಕು ತಲೆಗಳ ಜೊತೆ ನಾಲ್ಕು ಮರಗಳನ್ನ!!!!!!
ಚೆಲ್ಲಾಪಿಲ್ಲಿಯಾಗಿ ಬಿದ್ದವು ಮುಂಡಗಳು, ಮರಗಳ ಕಾಂಡಗಳು!!
ಈ ಸುದ್ದಿ ಗ್ರಾಮಗಳಿಗೆ ಹರಡಿತು. ಎಲ್ಲಾ ಮರಗಳನ್ನು ಕಡಿಯುವ ನಿರ್ಧಾರ ಮಾತ್ರ ಬದಲಾಗಲಿಲ್ಲ. ಆಗ ಶುರುವಾದದ್ದೇ "ಚಿಪ್ಕೋ ಆಂದೋಲನ".
ಚೆಲ್ಲಾಪಿಲ್ಲಿಯಾಗಿ ಬಿದ್ದವು ಮುಂಡಗಳು, ಮರಗಳ ಕಾಂಡಗಳು!!
ಈ ಸುದ್ದಿ ಗ್ರಾಮಗಳಿಗೆ ಹರಡಿತು. ಎಲ್ಲಾ ಮರಗಳನ್ನು ಕಡಿಯುವ ನಿರ್ಧಾರ ಮಾತ್ರ ಬದಲಾಗಲಿಲ್ಲ. ಆಗ ಶುರುವಾದದ್ದೇ "ಚಿಪ್ಕೋ ಆಂದೋಲನ".

ಬಿಷ್ಣೊಯಿ ಜನರು ಮರಗಳನ್ನು ತಬ್ಬಿ ಹಿಡಿದು (ಹಿಂದಿಯಲ್ಲಿ ಚಿಪ್ಕೋ ಅಂದರೆ ಅಂಟಿಕೊ) ಕಡಿಯಲು ಬಿಡದೆ ಮರಗಳನ್ನು ಸುತ್ತುವರೆದು ನಿಂತರು. ಆದರೆ, ಕನಿಕರ ಬಾರದ ಕೊಡಲಿಗಳು ಕಡಿದದ್ದು 363 ತಲೆಗಳನ್ನು!!!!!!
ವೃದ್ಧರು, ಯುವಕರು, ವಿವಾಹಿತರೂ, ಅವಿವಾಹಿತರೂ, ಬಡವ ಬಲ್ಲಿದ ಎಲ್ಲರೂ ತಮ್ಮ ಪ್ರಾಣವನ್ನು ಮರಗಳಿಗಿತ್ತರು! ತಲೆಗೊಂದು ಮರಗಳೂ ಉರುಳಿದವು! ಇಷ್ಟಾದಮೇಲೆ ರಾಜ ಮಹಾಶಯ ಬಂದ. ನೆಲಕ್ಕುರುಳಿದ ತಲೆಗಳು ಮರಗಳನ್ನು ನೋಡಿ ಅವನಿಗೆನನಿಸಿತೋ?! ಬಹುಶ್ಯಃ ಇಂದಿನ ರಾಜಕಾರಣಿ ತಲೆಮಾರು ಅನ್ನಿಸುತ್ತೆ, ಇನ್ನೆಲ್ಲಿ ಆ ರಾಜ್ಯದಿಂದ ಹೊರ ಬೀಳುವನೋ ಎಂದಂದಿಕೊಂಡು ಮರಗಳ ಕಡಿತಕ್ಕೆ ತಡೆಯಾಜ್ಞೆ ಜಾರಿ ಮಾಡಿದ ಪುಣ್ಯಾತ್ಮ! ಆ ಪ್ರದೇಶದಲ್ಲಿ ರಾಜಮನೆತನದವರೂ ಸೇರಿದಂತೆ ಯಾರು ಮರಗಳನ್ನು ಕಡಿಯುವಂತಿಲ್ಲ, ಪ್ರಾಣಿಗಳನ್ನು ಬೇಟೆ ಮಾಡುವಂತಿಲ್ಲ ಎಂಬ ಕಟ್ಟಾಜ್ಞೆ ಹೊರಡಿಸಿದ! 363 ತಲೆಗಳು ಬೇಕಾದವು ಆ ನಿಯಮ ಹೊರಬರಲು!!!!!!!!!

ವೃದ್ಧರು, ಯುವಕರು, ವಿವಾಹಿತರೂ, ಅವಿವಾಹಿತರೂ, ಬಡವ ಬಲ್ಲಿದ ಎಲ್ಲರೂ ತಮ್ಮ ಪ್ರಾಣವನ್ನು ಮರಗಳಿಗಿತ್ತರು! ತಲೆಗೊಂದು ಮರಗಳೂ ಉರುಳಿದವು! ಇಷ್ಟಾದಮೇಲೆ ರಾಜ ಮಹಾಶಯ ಬಂದ. ನೆಲಕ್ಕುರುಳಿದ ತಲೆಗಳು ಮರಗಳನ್ನು ನೋಡಿ ಅವನಿಗೆನನಿಸಿತೋ?! ಬಹುಶ್ಯಃ ಇಂದಿನ ರಾಜಕಾರಣಿ ತಲೆಮಾರು ಅನ್ನಿಸುತ್ತೆ, ಇನ್ನೆಲ್ಲಿ ಆ ರಾಜ್ಯದಿಂದ ಹೊರ ಬೀಳುವನೋ ಎಂದಂದಿಕೊಂಡು ಮರಗಳ ಕಡಿತಕ್ಕೆ ತಡೆಯಾಜ್ಞೆ ಜಾರಿ ಮಾಡಿದ ಪುಣ್ಯಾತ್ಮ! ಆ ಪ್ರದೇಶದಲ್ಲಿ ರಾಜಮನೆತನದವರೂ ಸೇರಿದಂತೆ ಯಾರು ಮರಗಳನ್ನು ಕಡಿಯುವಂತಿಲ್ಲ, ಪ್ರಾಣಿಗಳನ್ನು ಬೇಟೆ ಮಾಡುವಂತಿಲ್ಲ ಎಂಬ ಕಟ್ಟಾಜ್ಞೆ ಹೊರಡಿಸಿದ! 363 ತಲೆಗಳು ಬೇಕಾದವು ಆ ನಿಯಮ ಹೊರಬರಲು!!!!!!!!!

Subscribe to:
Post Comments (Atom)


ನೀನು ಸ್ವದೇಶೀ ದ್ವೇಷಿಯೆಂದು ಈ ನಿನ್ನ ಬರಹದಿಂದ ತಿಳಿದುಬರುತ್ತೆ. ಹಾಗೆಯೇ ನೀನು ಕೋಮುವಾದಿಯೆಂದೂ ಸಹ ಗೊತ್ತಾಗುತ್ತೆ. ಇನ್ನೇನಾದರೂ ತಿಳಿದುಬಂದರೆ ಇನ್ಯಾವತ್ತಾದರೂ....... ಹೇಳೋದಿಲ್ಲ!
ವಿ.ಸೂ. - ಅಕ್ಷರಶಃ ಅನ್ನೋ ಕಡೆ 'ಅಕ್ಷರಸಃ' ಎಂದು ಬರೆದಿರುವ ನಿನ್ನ ಕನ್ನಡ ಭಾಷೆಯ ಬಗೆಗಿನ ಅಸಡ್ಡೆಯು ಧಿಕ್ಕರಿಸಲ್ಪಡಬೇಕಾದ್ದು. ಧಿಕ್ಕರಿಸಿಕೊ.
ಮತ್ತೂ ವಿ.ಸೂ. - ಹೋಪ್‍ಲೆಸ್ ಫೆಲೋ.
Parisarapremi said...
May 12, 2009 8:44 PM
ಅಕ್ಷರಸಃ ----> ಯಾವ್ ರಸ ಇದು ? ಲಾವಾರಸದ ತಂಗಿ/ಅಕ್ಕ ? :-)...ಅದು ಅಕ್ಷರಶಃ ಕಣೆ...
ನಾವೆಲ್ಲ ಸುಮ್ನೆ ಹೆಸರಿಗೆ ಕಣ್ರೀ ಪರಿಸರಪ್ರೇಮಿಗಳು, ಪರಿಸರದ ಬಗ್ಗೆ ಕಳಕಳಿ ಇರೋರು ಅಂತ ಕೊಚ್ಕೊಳೋದು! ---> ಈ ಥರ ಹೆಸರುಗಳನ್ನೆಲ್ಲ ಹೀಗೆಲ್ಲ ಅವಹೇಳನಕಾರಿಯಾಗಿ ಬಳಸಿದರೆ ನಿನ್ನನ್ನು ರಾಜಕೀಯ ಪ್ರಚಾರ ಭಾಷಣ depute ಮಾಡಲಾಗುತ್ತದೆ !
ಆ ಮಹಾ ತಾಯಿ ಕಥೆ ನೀವು ಕೇಳಿದ್ದರೂ ಇನ್ನೊಮ್ಮೆ ಇಲ್ಲಿ ಬರೀತೀನಿ!---->>>ಭೇಷ್...ಮೊದ್ಲು ಗೊತ್ತಿಲ್ಲದೇ ಇರೋದನ್ನ ಬರೆಯೋಕೆ ಪುರ್ಸೊತ್ತಿರ್ಲಿಲ್ಲ ನಿಂಗೆ...ಈಗ ಗೊತ್ತಿರೋದನ್ನೇ ಮತ್ತೆ ಬರಿತಿದೀಯ...ಗುಡ್, ಹೀಗೆ ಮಾಡ್ತಿರು.
ಸ್ವಚ್ಛ ವಾತಾವರಣ... ಕಲುಷಿತ ಅಂದ್ರೆ ಏನಪ್ಪಾ ಅಂತಾನೆ ಗೊತ್ತಿಲ್ಲ! ನಿರಾಳ ಜೀವನ ನಮ್ಮ ಊರಲ್ಲಿ. ನಮ್ಮ ಬೆಂಗಳೂರು!---> ಈ ಲೈನು ಮೈಸೂರಿಗೆ ಹೆಚ್ಚು ಸೂಕ್ತ !
hmmm!!! ----> ಟಿಪಿಚಲ್ ನೀನು...
On the whole, good article.
Lakshmi S said...
May 12, 2009 9:13 PM
ಲಾಲ್ ಬಾಗ್ ತನ್ನ ಮರಗಳನ್ನ ಕಡೆಸಿಕೊಂಡು ಮರಗಳ ರಕ್ತದ ಓಕುಳಿಯಲ್ಲಿ ಮಿಂದು ಲಾಲ್ ಆಗುವುದನ್ನು ಹೇಗೆ ಮುಂಚೆ ಗ್ರಹಿಸಿದ್ದರೋ!! ಲಾಲ್ ಬಾಗ್!!!!
ee upame chennagide.......metro bekaagirlilla, aden jangaLO, adyaakingaadthaarO......hmmmm
anda haage gubbacchi picchar takka maTTige relief kodthu :-)
"chipko chaLuvaLi" hesru allalli keLidde....eega gottaaithu adu enantha..oLLe information -u...
matte amruthadevi thara bengLur nalli yaaru maaDalla..maragaLu kaDidre yaaru hogi thale nu kodalla... haLLi janakku nagaradallirorgu ade difference..
nice article...
kone maathu:
jayanagarada kaDe bartiro "metro" mane haaLaaga....
ಶ್ರೀಧರ ರಾಜು said...
May 12, 2009 11:36 PM
@Parisarapremi ::
illiro huLagaLa dore neeve!!
nimge v(y)aadi rOga naa? eno kOmuvaadi ankonduuu.....
@lakshmi ::
:-)
ಅಕ್ಷರಸಃ --> aksha haNNu gottilvene? adurdu rasa ne aksharasa... adunna kuDiddre v(y)aadi rOga sari hogutte anta obbru heLidaare!
Anyways, thanks for the correction!
@Srikantha ::
ವಿ.ಸೂ. - neenu kuDi aksharasa..
@Sridhra ::
goodh boy! oLLe haaraike metro mane ge heheheh......
Dynamic Divya said...
May 15, 2009 3:11 PM
Conunt less thale galu bakeu ansuthe rajakaranigalladdu,
Nagendra said...
May 23, 2009 7:07 PM